ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ
*******************************************
"ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ"
******************************************
"ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"
******************************************
"ನನ್ನೆದೆಯ ಬಾಂದಳದೀ
ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ"
******************************************
"ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು"
******************************************
"ದೇಶಭಕ್ತಿಯ ಬಿಸಿಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ
ವಿಶ್ವಪ್ರೇಮದ ಶಾಂತಿ ಮಂತ್ರದ ಘೋಷವ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ ತತ್ವ ಜ್ಯೋತಿಯ ಬೆಳಗಿಸಲಿ"
******************************************
ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯಾ ಹೇಕೆ ಬಿಟ್ಟು ಹೋದೆ
******************************************
ಬಾನಾಡಿಗೊಂದು ಸವಿ ಮಾತು ಕಲಿಸುವ
ಆ ವೀಣೆಗೊಂದು ಎದೆ ರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೋಡುವ
ನಾ ನಾ ನ... ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ
ಪ್ರೇಮವೆ ಇಲ್ಲದೆ ನಾನು ನೀನು ಯಾಕೆ
******************************************
ಏಕಾಂಗಿ ಯಾನದಲಿ ತೂರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ
ಬೆಳದಾ ನೆನಪಿನಾ ಜೊತೆಗೆ ಮುಗಿದಾ ದಾರಿಯೂ
ಬರಿದಾ ಕನಸಿನಾ ಮುಗಿಲಿಗೆ ಮೌನದೇಣಿಯು
ಈ ನಗುವಿನ ಮುಖದಲ್ಲಿ ಬರಿ ನೋವಿದೆಯೋ
ಉಸಿರಾಡೋ ಜೀವಕಿಲ್ಲಿ ಸಾವಿದೆಯೋ
******************************************
ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ..ಏ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೇ ಏಕೆ
ನಿನ್ನೊಲವು ನಿಜವೇ ಆದರೇ
*******************************************
ಮೊದಲು ಅಪ್ಪಿಕೊ೦ಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೊ
ಸನಿಹ ಸನಿಹದಲಿ ಯಾಕಿದೆ ವಿರಹ ಹೇಳುವೆಯ.. ಆ ಆ
*******************************************
ತಾಯಿ ತೊರೆದ ಮಗುವಿನ
ಅಳುವ ಮರೆಸೋ ನಗುವಿನ
ನಗುತ ಅಳುವ ಜೀವನ
ಖಾಲಿ ಪುಟದ ಸ್ಪಂದನ
- ಇಂತಿ ನಿನ್ನ ಪ್ರೀತಿಯ
ನಾನ್ಯಾರು ? ನಾನ್ಯಾರು ? ನಾನ್ಯಾರು ?
*********************************************
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ
ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ
********************************************
ಕಿಸೆಯಲ್ಲಿ ಕದ್ದ ಚಂದ್ರನ ಚೂರು, ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ, ಹಾರಾಟವೆ ನಮ್ಮ ಹಟ
********************************************
ಉಕ್ಕಿಬರುವಾ ಕಂಠದಲಿ
ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವಾ ಎದೆಯೊಳಗೆ
ನಗುತಲಿದೆ ಮಡಿದಾ ಕವನ
ಒಂಟಿತನದ ಗುರುವೇ ಒಲವೇ
********************************************
ಮುಗಿಲಾ ಹೆಗಲಾ ಮೇಲೇರಿ ತೇಲುತಿದೆ ಹೃದಯಾ
ಮಾಡಿಲಾ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಾಗೊ ಸಮಯಾ
ಏಕಾಂತ ಘಲ್ಲನ್ನು ಮಾಡುವುದೋ ಕವಿಯಾ
********************************************
No comments:
Post a Comment